ಯುಜೆನ್ ಪೌಲ್ ವಿಗ್ನರ್ರವರೊಬ್ಬ ಹಂಗೇರಿಯನ್ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ,ಎಂಜಿನಿಯರ್ ಮತ್ತು ಗಣಿತಜ್ಞ. ಅವರು ೧೯೬೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. = ಜನನ = ಯುಜೆನ್ ರವರು ನವೆಂಬರ್ ೧೭,೧೯೦೨ ರಂದು ಬುಡಾಪೆಸ್ಟ್,ಆಸ್ಟ್ರಿಯಾ - ಹಂಗೇರಿ ಯಲ್ಲಿ ಜನಿಸಿದರು. ಇವರ ತಂದೆ ಅಂಥೋನಿ ವಿಗ್ನರ್ ,ತಾಯಿ ಎಲಿಜಬೆತ್. = ವೈಜ್ಞಾನಿಕ ಕ್ಷೇತ್ರಗಳು = ಸೈದ್ಧಾಂತಿಕ ಭೌತಶಾಸ್ತ್ರ. ಪರಮಾಣು ಭೌತಶಾಸ್ತ್ರ. ಘನ-ಸ್ಥಿತಿ ಭೌತಶಾಸ್ತ್ರ. = ವಿಗ್ನರ್ ಹೆಸರುವಾಸಿಯಾಗಿದ್ದು = ಬಾರ್ಗ್ಮನ್-ವಿಗ್ನರ್ ಸಮೀಕರಣಗಳು. ಲಾ ಆಫ್ ಕನ್ಸರ್ವೇಷನ್ ಆಫ್ ಪೇರಿಟಿ. ವಿಗ್ನರ್ ಡಿ-ಮ್ಯಾಟ್ರಿಕ್ಸ್. ವಿಗ್ನರ್ - ವಿಕಾರ್ಟ್ ಪ್ರಮೇಯ. ವಿಗ್ನರ್ ಅರ್ಧವೃತ್ತ ವಿತರಣೆ. ವಿಗ್ನರ್ ವರ್ಗೀಕರಣೆ. ವಿಗ್ನರ್ ಡಿಸ್ಟ್ರಿಬ್ಯೂಷನ್ ಫಂಕ್ಷನ್. ವಿಗ್ನರ್ ಕ್ವಾಸಿ ಪ್ರೊಬ್ಯಾಬಿಲಿಟಿ ಡಿಸ್ಟ್ರಿಬ್ಯೂಷನ್. ವಿಗ್ನರ್ ಕ್ರಿಸ್ಟಲ್. ವಿಗ್ನರ್ ಎಫೆಕ್ಟ್. ವಿಗ್ನರ್ ಎನರ್ಜಿ. ವಿಗ್ನರ್ ಲ್ಯಾಟಿಸ್. ಸಾಪೇಕ್ಷತಾತಜ್ಞ ವಿಜ್ಞಾನಿ ವಿತರಣೆ ಮಾರ್ಪಟಿಸಿದ ವಿಗ್ನರ್ ವಿತರಣೆ ಕಾರ್ಯ ‌ ವಿಗ್ನರ್ - ಸೀಟ್ಜ್ ಸೆಲ್. ವಿಗ್ನರ್ - ಸೀಟ್ಜ್ ತ್ರಿಜ್ಯ. ವಿಗ್ನರ್ - ಇನುನೊ ಸಂಕೋಚನ. ಥಾಮಸ್ - ವಿಗ್ನರ್ ರೊಟೇಷನ್. ವಿಗ್ನರ್ - ವೇಯ್ಲ್ ರೂಪಾಂತರ. ವಿಗ್ನರ್ ವಿಲ್ಕಿನ್ಸ್ ಸ್ಪೆಕ್ಟ್ರಮ್. ನ್ಯೂಟನ್ - ವಿಗ್ನರ್ ಸ್ಥಳೀಕರಣ. ಗ್ಯಾಬೊರ್ - ವಿಗ್ನರ್ ರೂಪಾಂತರ. ಜೋರ್ಡಾನ್ - ವಿಗ್ನರ್ ಪರಿವರ್ತನೆ. ವಿಗ್ನರ್ ಪ್ರಮೇಯ. 9 - ಜೆ ಚಿಹ್ನೆ. 6 - ಜೆ ಚಿಹ್ನೆ. = ಪ್ರಕಟಣೆಗಳು = ೧೯೫೮: (ಆಲ್ವಿನ್ ಎಮ್. ವೈನ್ಬರ್ಗ್ ಜೊತೆ) ನ್ಯೂಟನ್ ರ ಚೈನ್ ರಿಯಾಕ್ಟರ್ಗಳ ಶಾರೀರಿಕ ಸಿದ್ಧಾಂತ ಚಿಕಾಗೊ ಪ್ರೆಸ್ ವಿಶ್ವವಿದ್ಯಾಲಯ. ೧೯೫೯: ಗ್ರೂಪ್ ಥಿಯರಿ ಮತ್ತು ಅದರ ಅಪ್ಲಿಕೇಶನ್ ಅಟಾಮಿಕ್ ಸ್ಪೆಕ್ಟ್ರಾ ಕ್ವಾಂಟಮ್ ಮೆಕ್ಯಾನಿಕ್ಸ್. ೧೯೭೦: ಸಿಮೆಟ್ರೀಸ್ ಅಂಡ್ ರಿಫ್ಲೆಕ್ಷನ್ಸ್. ೧೯೯೨: (ಆಂಡ್ರ್ಯೂ ಸ್ಜಾಂಟನ್ಗೆ ಹೇಳಿದಂತೆ)ಯುಜೆನ್ ಪಿ. ವಿಗ್ನರ್ ರ ನೆನಪುಗಳು, ಪ್ಲೀನಮ್. ೧೯೯೫: (ಜಗದೀಶ್ ಮೆಹ್ರಾ ಮತ್ತು ಆರ್ಥರ್ ಎಸ್. ವಿಟ್ಮನ್, ಸಂಪಾದಕರು) ಫಿಲಾಸಫಿಕಲ್ ರಿಫ್ಲೆಕ್ಷನ್ಸ್ ಅಂಡ್ ಸಿಂಥೆನಿಧನರಾದರು. = ಪ್ರಶಸ್ತಿಗಳು = ಮೆಡಲ್ ಆಫ್ ಮೆರಿಟ್ - ೧೯೪೬. ಫ್ರಾಂಕ್ಲಿನ್ ಮೆಡಲ್ - ೧೯೫೦. ಎನ್ರಿಕೊ ಫೆರ್ಮಿ ಪ್ರಶಸ್ತಿ - ೧೯೫೮. ಆಡಮ್ಸ್ ಫಾರ್ ಪೀಸ್ ಅವಾರ್ಡ್‌ - ೧೯೫೯. ಮ್ಯಾಕ್ಸ್ ಪ್ಲಾಂಕ್ ಮೆಡಲ್ - ೧೯೬೧. ನೊಬೆಲ್ ಪ್ರಶಸ್ತಿ (ಭೌತಶಾಸ್ತ್ರ) - ೧೯೬೩. ನ್ಯಾಷನಲ್ ಮೆಡಲ್ ಆಫ್ ಸೈನ್ಸ್ - ೧೯೬೯. ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್‌ - ೧೯೭೨. ವಿಗ್ನರ್ ಮೆಡಲ್ - ೧೯೭೮. = ಮರಣ = ವಿಗ್ನರ್ ರವರು ನ್ಯುಮೋನಿಯಾ ದಿಂದಾಗಿ ಜನವರಿ ೧,೧೯೯೫ ರಂದು ನ್ಯಾಜರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್ ನಲ್ಲಿ ನಿಧನರಾದರು. = ಉಲ್ಲೇಖಗಳು =